DA Hike: ಡಿಎ ಹೆಚ್ಚಿಸಿ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ ಕೊಟ್ಟ ಈ ರಾಜ್ಯದ ಕಾಂಗ್ರೆಸ್ ಸರ್ಕಾರ! ನವೆಂಬರ್ 1ಕ್ಕೆ ಖಾತೆ ಸೇರುತ್ತೆ ತುಟ್ಟಿಭತ್ಯೆ ಹಣ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ


Last Updated:

ಕೇರಳ ಸರ್ಕಾರದ ಬೆನ್ನಲ್ಲೇ ಇದೀಗ ಹಿಮಾಚಲ ಪ್ರದೇಶ ಸರ್ಕಾರವು ದೀಪಾವಳಿ ಹಬ್ಬದ ಮುನ್ನವೇ ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಹೆಚ್ಚಿಸಿ ಸಿಹಿಸುದ್ದಿ ನೀಡಿದೆ.

ಎಐ ಜನರೇಟೆಡ್ ಇಮೇಜ್
ಎಐ ಜನರೇಟೆಡ್ ಇಮೇಜ್

ಕೇರಳ ಸರ್ಕಾರದ ಬೆನ್ನಲ್ಲೇ ಇದೀಗ ಹಿಮಾಚಲ ಪ್ರದೇಶ (Himachal Pradesh) ಸರ್ಕಾರವು ದೀಪಾವಳಿ (Deepavali) ಹಬ್ಬದ ಮುನ್ನವೇ ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಭರ್ಜರಿ ಉಡುಗೊರೆ ನೀಡಿದ್ದು, ಶೇಕಡಾ 5 ರಷ್ಟು ತುಟ್ಟಿಭತ್ಯೆ (DA) ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರಿ ಸೇವೆಯಲ್ಲಿರುವ ಗ್ರೂಪ್-ಡಿ (Class IV) ನೌಕರರಿಗೆ ಹೆಚ್ಚುವರಿಯಾಗಿ 10,000 ರೂಪಾಯಿಗಳ ಆರ್ಥಿಕ ಪರಿಹಾರವನ್ನು ಪ್ರಕಟಿಸಿದೆ. ನವೆಂಬರ್ 1 ರಂದು ಈ ಹೆಚ್ಚುವರಿ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ. ರಾಜ್ಯ ಎದುರಿಸುತ್ತಿರುವ ಆರ್ಥಿಕ ಸವಾಲುಗಳ ನಡುವೆಯೂ ಸರ್ಕಾರಿ ನೌಕರರ ಹಿತರಕ್ಷಣೆಗೆ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

2.75 ಲಕ್ಷ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್

ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಶುಕ್ರವಾರ ಈ ಅಧಿಕೃತ ಘೋಷಣೆ ಮಾಡಿದ್ದು, ಈ 5% ಹೆಚ್ಚಳದಲ್ಲಿ ಪ್ರಸ್ತುತ ವರ್ಷದ 4% ತುಟ್ಟಿಭತ್ಯೆ ಮತ್ತು ಕಳೆದ ವರ್ಷದ ಬಾಕಿ ಇದ್ದ 1% ಕಂತು ಸೇರಿದೆ ಎಂದು ವಿವರಿಸಿದ್ದಾರೆ. ಸರ್ಕಾರದ ಈ ಮಹತ್ವದ ತೀರ್ಮಾನದಿಂದ ರಾಜ್ಯದ ಸುಮಾರು 2.75 ಲಕ್ಷ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೇರ ಪ್ರಯೋಜನ ಸಿಗಲಿದೆ.

ಶಿ ಸುಮ್ಲಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ರಾಜ್ಯದ ಅಭಿವೃದ್ಧಿಯಲ್ಲಿ ನೌಕರರು ಭದ್ರ ಬುನಾದಿ ಹಾಕುತ್ತಾರೆ. ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುತ್ತಲೇ ನೌಕರರಿಗೆ ಸಿಗಬೇಕಾದ ಹಕ್ಕು ಮತ್ತು ಸೌಲಭ್ಯಗಳನ್ನು ತಲುಪಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ನಾಲ್ಕನೇ ದರ್ಜೆ ನೌಕರರಿಗೆ 10 ಸಾವಿರ ನೆರವು

ನಾಲ್ಕನೇ ದರ್ಜೆ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಪಿಂಚಣಿ ಮತ್ತು ವೇತನ ಪರಿಷ್ಕರಣೆಯ ಬಾಕಿ ಮೊತ್ತವಾಗಿ ಹೆಚ್ಚುವರಿ 10,000 ರೂಪಾಯಿಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ನೌಕರರು ತಮ್ಮ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಸಂತೋಷದಿಂದ ಆಚರಿಸಲಿ ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

99,000 ಕೋಟಿ ರೂಪಾಯಿ ಸಾಲ

ರಾಜ್ಯದ ಹಣಕಾಸು ಪರಿಸ್ಥಿತಿಯ ಕುರಿತು ಮಾತನಾಡಿದ ಸಿಎಂ, ಹಿಮಾಚಲ ಪ್ರದೇಶದ ಮೇಲೆ 1.20 ಲಕ್ಷ ಕೋಟಿ ರೂಪಾಯಿ ಸಾಲವಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದು, ಪ್ರಸ್ತುತ ಒಟ್ಟು ಸಾಲ ಸುಮಾರು 99,000 ಕೋಟಿ ರೂಪಾಯಿಗಳಷ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರದಿಂದ ಬರುತ್ತಿದ್ದ ಕಂದಾಯ ಕೊರತೆ ಅನುದಾನ (RDG) ನಿಂತುಹೋಗಿರುವುದರಿಂದ ಆರ್ಥಿಕ ಒತ್ತಡವಿದ್ದರೂ, ಕಠಿಣ ಹಣಕಾಸು ಶಿಸ್ತಿನ ಮೂಲಕ 2030 ರ ವೇಳೆಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯವನ್ನು ಸಂಪೂರ್ಣ ಸ್ವಾವಲಂಬಿಯನ್ನಾಗಿ ಮಾಡಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರಿ ನೌಕರರಿಗೂ ಸಿಗಲಿದೆಯೇ ದೀಪಾವಳಿ ಗಿಫ್ಟ್?

ಕೇಂದ್ರ ಸರ್ಕಾರವು ಕೂಡ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ದೀಪಾವಳಿಗೆ ಮುನ್ನ ಅಂದರೆ ಅಕ್ಟೋಬರ್ 28 ರಂದು ತುಟ್ಟಿಭತ್ಯೆ ಹೆಚ್ಚಳದ ಸಿಹಿ ಸುದ್ದಿ ನೀಡುವ ಸಾಧ್ಯತೆಯಿದೆ. ಅಕ್ಟೋಬರ್ 14 ಮತ್ತು 21 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಯಾವುದೇ ನಿರ್ಧಾರ ಹೊರಬೀಳದ ಕಾರಣ, ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಅಕ್ಟೋಬರ್ 28 ರಂದು ನಡೆಯಲಿರುವ ಮುಂದಿನ ಸಭೆಯ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *