೪ ಲಕ್ಷ ಟನ್ ಕಬ್ಬು ನುರಿಸುವ ಗುರಿ


ಚನ್ನಮ್ಮನ ಕಿತ್ತೂರು,ಅ೨೧: ತಾಲೂಕಿನ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸನ್ ೨೦೨೬-೨೭ನೇ ಸಾಲಿ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ ಪ್ರದೀಪನ ಪೂಜಾ ಕಾರ್ಯಕ್ರಮ ವಿಜೃಂಭಣೆ ಹಾಗೂ ಅದ್ದೂರಿಯಿಂದ ಜರುಗಿತು.

ಸಭೆ ಅಧ್ಯಕ್ಷತೆ ವಿಪ್ ಸದಸ್ಯ, ಕಾರ್ಖಾನೆ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ವಹಿಸಿ ಮಾತನಾಡಿ ಈ ಸಲದ ಮುಂಗಾರು ಹಂಗಾಮನ್ನು ಬೇಗನೇ ಪ್ರಾರಂಭಿಸಿ ಒಳ್ಳೆಯ ಕ್ರಶಿಂಗ್ ಮಾಡಿ ರಿಕವರಿ ಮಾಡೋಣ. ಅದಕ್ಕೆಲ್ಲಾ ಕಾರ್ಮಿಕರು ಸನ್ನದ್ಧರಾಗಿ ಕಾರ್ಯ ನಿರ್ವಹಿಸಬೇಕು. ನಿಮ್ಮ ಜೊತೆಯಲ್ಲಿ ಆಡಳಿತ ಮಂಡಳಿ ಇರುತ್ತದೆ. ಶಾಸಕ ಬಾಬಾಸಾಹೇಬ ಪಾಟೀಲ, ಖಾನಾಪೂರ ಶಾಸಕ ವಿಠ್ಠಲ್ ಹಲಗೇಕರ, ರೈತರ, ಇವರ ಸಹಕಾರದಿಂದ ಈ ಹಂಗಾಮಿನಲ್ಲಿ ೪ ಲಕ್ಷ ಟನ್ ಕಬ್ಬು ಅರೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಯಾವುದೊಂದು ಕಾರ್ಖಾನೆ ಅಭಿವೃದ್ಧಿ ಹೊಂದಬೇಕಾದರೆ ಅಧಿಕಾರಿ ಹಾಗೂ ನಿರ್ದೇಶಕ ಮಂಡಳಿ ಅಷ್ಟೇ ಜವಾಬ್ದಾರಿ ಇರುವುದಿಲ್ಲ. ಕಾರ್ಮಿಕರ ಹಾಗೂ ರೈತರ ಜವಾಬ್ದಾರಿಯೂ ಇರುತ್ತದೆ. ಒಳ್ಳೆಯ ರೀತಿಯಿಂದ ಕಾರ್ಯನಿರ್ವಹಿಸಿದರೆ ಅಭಿವೃದ್ದಿ ಸಾಧ್ಯ. ರೈತರು ಒಳ್ಳೆಯ ಕಬ್ಬನ್ನು ಬೇರೆ ಕಾರ್ಖಾನೆಗೆ ಕಳುಹಿಸದೇ ನಮ್ಮ ಕಾರ್ಖಾನೆಗೆ ಪೂರೈಸಿ. ಕಾರ್ಖಾನೆ ಸ್ಥಗಿತವಾದರೆ ಒಳ್ಳೆಯ ವ್ಯವಸ್ಥಾಪಕ ನಿರ್ದೇಶಕರು ಟೆಕ್ನಿಸಿಯನ್ ಇದ್ದಾರೆ ಅವರಿಗೆ ತಿಳಿಸಿ. ೨೦೨೭-೨೮ನೇ ಸಾಲಿನಲ್ಲಿ ಹಳೆ ಮಿಲ್ನನ್ನು ನವೀಕರಿಸಿ ಹೊಸ ಮಿಲ್ ತಯಾರಿಸಿ ಅಲ್ಲಿಯೇ ಕಬ್ಬು ನೂರಿಸಲು ಪ್ರಾರಂಭಿಸೋಣ. ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಈಗಾಗಲೇ ೧೦ ವರ್ಷಗಳಿಂದ ಶೇರುದಾರರಿಗೆ ಸಕ್ಕರೆ ವಿತರಿಸುವುದು ಸ್ಥಗಿತಗೊಂಡಿತ್ತು ಆದರೆ ಈ ಸಲ ಸಕ್ಕರೆ ವಿತರಿಸಲು ಆಡಳಿತ ಮಂಡಳಿ ನಿರ್ಣಯಿಸಿದೆ. ರೈತರಿಗಾಗಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಇದರ ಲಾಭ ರೈತರು ಪಡೆದುಕೊಳ್ಳಬೇಕು. ಸದ್ಯದಲ್ಲಿ ಕಾರ್ಖಾನೆ ಪ್ರಾರಂಬಿಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದ್ದು ರೈತರ ಹೋರಾಟ ಮುಗಿದ ತಕ್ಷಣ ಕಾರ್ಖಾನೆ ಪ್ರಾರಂಭಿಸಲಾಗುವುದು. ನಿವೃತ್ತಿ ಹೊಂದಿದ ಕಾರ್ಮೀಕರಿಗೆ ಅಂದಾಜು ರೂ ೩ ಕೋಟಿ. ಗ್ರಾö್ಯಜುವೆಟಿ ಬಾಕಿ ಅದರಲ್ಲಿ ಈ ಹಂಗಾಮಿನಲ್ಲಿ ರೂ. ೭೫ ಲಕ್ಷ ನೀಡಲಾಗುವುದು. ೨೦ ಕಿ.ಮೀ ವ್ಯಾಪ್ತಿಯಲ್ಲಿ ಕಬ್ಬು ತರಲು ರೂ. ೧೬ ಕೋಟಿ ಎಚ್‌ಎನ್‌ಟಿ ಭರಿಸಲಾಗಿದೆ. ಆದ್ದರಿಂದ ಒಟ್ಟಾರೆಯಾಗಿ ಕಾರ್ಖಾನೆ ಒಳಿತಿಗಾಗಿ ಕೈಜೋಡಿಸೋಣ ಎಂದರು.

ಡಿಸಿಸಿ ಬ್ಯಾಂಕ ನಿರ್ದೇಶಕ ನಾನಾಸಾಹೇಬ ಪಾಟೀಲ ಮಾತನಾಡಿ ಕಾರ್ಖಾನೆ ನಡೆಸಬೇಕಾದರೆ ಎಷ್ಟೋ ಅಡತಡೆಗಳು ಇವೆ. ಪ್ರತಿಯೊಂದು ಬ್ಯಾಂಕ ಸಾಲ ನೀಡಬೇಕಾದರೆ ಆ ಕಾರ್ಖಾನೆ ಉತ್ಪನ್ನ ನೋಡಿ ಸಾಲ ನೀಡುತ್ತಾರೆ. ಆದ್ದರಿಂದ ಬೇರೆಡೆ ಕಬ್ಬು ಪೂರೈಸದೇ ಇದೇ ಕಾರ್ಖಾನೆಗೆ ಕಬ್ಬು ಪೂರೈಸಿ ಯೋಗ್ಯ ಬೆಲೆ ತೆಗೆದುಕೊಳ್ಳಿ ಎಂದು ರೈತರಿಗೆ ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಶಶಿಕಾಂತ ಪಾಟೀಲ ಮಾತನಾಡಿ ಒಂದು ಸಂಸ್ಥೆ ಬೆಳೆಯಬೇಕಾದರೆ ಎಲ್ಲರ ಸಹಕಾರ ಅಗತ್ಯ ಕಾರ್ಖಾನೆ ಪ್ರಾರಂಭಿಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದ್ದು ಅಧ್ಯಕ್ಷರ, ನಿರ್ದೇಶಕ ಮಂಡಳಿ, ನಿರ್ದೇಶನದಂತೆ ಮುಂದೆವರಿಸಲಾಗುವುದು. ಇದಕ್ಕೆ ಕಾರ್ಮಿಕ ಹಾಗೂ ರೈತರ ಸಹಕಾರ, ಮಾರ್ಗದರ್ಶನ ಅವಶ್ಯವಿದೆ. ಬರುವ ದಿನಗಳಲ್ಲಿ ಮೊದಲಿನ ಗತವೈಭವ ಸಾರುವಂತೆ ಅಭಿವೃದ್ದಿ ಪಡಿಸಲು ನಾವೆಲ್ಲರೂ ಮುಂದಾಗಬೇಕೆAದರು.

ಸಾನಿಧ್ಯವಹಿಸಿ ಆರ್ಶೀವಚನ ನೀಡಿ ಮಾತನಾಡಿದ ರುದ್ರಸ್ವಾಮಿಮಠ ಅವರೊಳ್ಳಿ-ಬೀಳಕಿ ಚನ್ನಬಸವದೇವರು, ತೊಲಗಿ-ಚಿಕ್ಕಲದಿನ್ನಿ ಸೋಮಲಿಂಗೇಶ್ವರ ಮಠದ ಅದೃಶ್ಯ ಶಿವಾಚಾರ್ಯ ಸ್ವಾಮಿಜೀ, ಕಾದ್ರೋಳ್ಳಿ ರಾಮಮಂದಿರ ಗುರುಪುತ್ರ ಮಹಾರಾಜರು ಸಾನಿಧ್ಯವಹಿಸಿದ್ದರು.

ಕಾರ್ಖಾನೆ ಉಪಾದ್ಯಕ್ಷ ಶಿವನಗೌಡ.ದೊ.ಪಾಟೀಲ ಸ್ವಾಗತಿಸಿದರು, ನಿರ್ದೇಶಕ ಶಂಕರ ಹೊಳಿ ಮಾತನಾಡಿದರು. ಕಛೇರಿ ಅಧೀಕ್ಷಕ ಎಸ್.ಜಿ.ಹೆಗಡೆ ವಂದಿಸಿದರು.



Source link

Leave a Reply

Your email address will not be published. Required fields are marked *